Saturday, April 24, 2010

africans in karnataka.....!!

ಆಫ್ರಿಕನ್ ಕನ್ನಡಿಗರು..

ಆಫ್ರಿಕಾ ಖಂಡದವರು ಅಂದಾಕ್ಷಣ ನಮ್ ಕಣ್ಮುಂದೆ ನಿಲ್ಲೋದು ದೈತ್ಯಾಕಾರದ ವ್ಯಕ್ತಿಗಳು ...ಕಪ್ಪು ಮೈ ಬಣ್ಣ ,ಸಾಮಾನ್ಯವಾಗಿ ಆರಡಿಗಿಂತ ಎತ್ತರದ ಕಟ್ಟುಮಸ್ತಾದ ಮೈ ಕಟ್ಟು ,ಚಿತ್ರ ವಿಚಿತ್ರವಾದ ಕೇಶ ವಿನ್ಯಾಸ .ಇಂಥ ಲಕ್ಷಣಗಳು ಆಫ್ರಿಕಾ ಅಲ್ಲದೆ ಬೇರೆ ಎಲ್ಲಾದ್ರು ಕಂಡು ಬಂದ್ರು ಸಹ ನಾವ್ ಆ ವ್ಯಕ್ತಿನ ಆಫ್ರಿಕನ್ ಅಂತಾನೆ ಕರೆಯೋದು ....ಈಗಿನ ಆಫ್ರಿಕಾದಲ್ಲಿ ಎಲ್ರು ಕಪ್ಪು ಬಣ್ಣದೋರು ಅಂದ್ರೆ ತಪ್ಪಾಗುತ್ತೆ...ಆಫ್ರಿಕಾ ಖಂಡದ ವಿವಿಧ ದೇಶಗಳನ್ನು ಆಳಿದಂತ ಯುರೋಪಿಯನ್ನರು ತಮ್ಮ ಆಡಳಿತದ ಕುರುಹಾಗಿ ಅನ್ನುವಂತೆ ಬಿಳಿ ಜನರ ಸಂತತಿಯನ್ನು ವೃದ್ಧಿ ಮಾಡಿ ಹೋಗಿದ್ದಾರೆ...ನೀವು ಈ ದಕ್ಷಿಣ ಆಫ್ರಿಕಾ,ಜಾಂಬಿಯ,ಜಿಂಬಾಬ್ವೆ ಕಡೆ ಸುತ್ತು ಹಾಕೊಂಡು ಬಂದ್ರೆ ತುಂಬ ಬಿಳಿ ಜನ ನೋಡೊಕೆ ಸಾಧ್ಯ ಏಕೆಂದರೆ ಇಲ್ಲಿ ಬ್ರಿಟಿಷ್ರು ತುಂಬ ವರ್ಷ್ ಆಡಳಿತ ನಡೆಸಿದ್ರು.. ..ಪಶ್ಚಿಮ ಆಫ್ರಿಕಾ ಭಾಗದಲ್ಲಿ ಇರುವ ಸೆನೆಗಲ್, ಐವರಿ ಕೋಸ್ಟ್, ಮೊರಾಕ್ಕೊ ,ಅಲ್ಜಿರಿಯ ಮುಂತಾದ ದೇಶಗಳಲ್ಲಿ ಫ್ರೆಂಚ್ ಆಡಳಿತ ರಾರಾಜಿಸಿತ್ತು ಆದ್ದರಿಂದ ಅಲ್ಲಿ ಕೂಡ ಬಿಳಿಯರು ನೆಲೆಸಿದ್ದಾರೆ. ಇನ್ನು ಈ ಪೋರ್ಚುಗೀಸರು ಪೂರ್ವ ಆಫ್ರಿಕಾದ ಮೊಜಾಂಬಿಕ್ ,ಮಡಗಾಸ್ಕರ್,ಉಗಾಂಡದ ಕೆಲವು ಪ್ರಾಂತ್ಯಗಳನ್ನ ಭಾರತಕ್ಕೆ ಬರುವ ಮುಂಚೇನೆ ಆಳುತ್ತಾ ಇದ್ದರು..ನಿಮಗೆ ಗೊತ್ತಿರುವಂತೆಯೆ ಪೋರ್ಚುಗೀಸರು ನಮ್ಮ ನೆರೆ ರಾಜ್ಯ ಗೋವಾವನ್ನು ಬಿಟ್ಟು ಹೋಗಿದ್ದು ಕೇವಲ ೫೦ ವರ್ಷದ ಹಿಂದೆ...

"ಆಫ್ರಿಕನ್ ಕನ್ನಡಿಗರು" ಅನ್ನೋ ಶೀರ್ಷಿಕೆ ಕೊಟ್ಟು ಈ ಫಿರಂಗಿ ಆಡಳಿತದ ಬಗ್ಗೆ ಯಾಕೆ ಹೇಳ್ತಾ ಇದ್ದೀನಿ ಅನ್ನೋದು ನಿಮಗೆ ಇಲ್ಲಿ ತನಕ ಕಾಡಿರೋ ಪ್ರಶ್ನೆ ಅನ್ನೋದೊಂದು ಸತ್ಯ..???!!!

ಪೋರ್ಚುಗೀಸರು ಗೋವಾಗೆ ಬಂದಾಗ ತಮ್ಮ ಜೊತೆ ಈ ಕಪ್ಪು ಆಫ್ರಿಕನ್ನರನ್ನು ಆಳುಗಳಾಗಿ ಕೆಲಸ ಮಾಡಿಸಿಕೊಳ್ಳೊಕೆ ಕರೆದುಕೊಂಡು ( ಎಳೆದುಕೊಂಡು ) ಬಂದಿದ್ದರು,ವಸಾಹತುಶಾಹಿ ಕಾಲದ ಕ್ರೂರತೆಯ ಅರಿವು ಭಾರತೀಯರಿಗೆ ಚಿರಪರಿಚಿತ,ಹಾಗೇನೆ ಪೋರ್ಚುಗೀಸರ ಕಿರುಕುಳ ತಾಳಲಾರದೆ ಮನನೊಂದು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಆಫ್ರಿಕನ್ ಆಳುಗಳು ದಕ್ಷಿಣದ ಕಡೆ ಓಡಿ ಬಂದರು,ಈಗಿನ ಗೋವಾ ರಾಜ್ಯಕ್ಕೆ ದಕ್ಷಿಣದಲ್ಲಿರುವ ಉತ್ತರ ಕನ್ನಡ ,ಶಿವಮೂಗ್ಗ ಜಿಲ್ಲೆಯ ದಟ್ಟಡವಿಯಲ್ಲಿ ತಮ್ಮ ನೆಲೆ ಕಂಡುಕೊಂಡರು,ಪೋರ್ಚುಗೀಸರ ಕಣ್ಣಿಗೆ ಕಾಣದೆ ಜೀವಂತವಾಗಿ ಕಾಡಿನ ಬದಿಯ ಹಳ್ಳಿಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ನಮ್ಮೊಳಗೆ ಒಬ್ಬರಾಗಿ ಉಳಿದರು.

ಅಷ್ಟೆ ಅಲ್ಲದೆ ಅರಬ್ ವ್ಯಾಪಾರಿಗಳು ಆಫ್ರಿಕನ್ ಜನರನ್ನು ಹಡಗಿನಲ್ಲಿ ಕೆಲಸಕ್ಕಾಗಿ ಭಾರತಕ್ಕೆ ಕರೆದುಕೊಂಡು ಬಂದ ಹಲವಾರು ಉಲ್ಲೇಖಗಳುಂಟು.ಈ ರೀತಿಯಾಗಿ ಗುಜರಾತಿನಲ್ಲಿ ಕೂಡ ವ್ಯಾಪಕವಾಗಿ ಹರಡಿದ್ದಾರೆ.

ಈಗಲೂ ಕೂಡ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೋಕಿನಲ್ಲಿ ಮೊಲತಃ ಆಫ್ರಿಕನ್ನರ ಚಹರೆಯನ್ನೇ ನೆನಪಿಸುವಂತಹ ಹಲವಾರು ಜನರನ್ನು ಇಂದಿಗೂ ಕಾಣಸಿಗುತ್ತಾರೆ.ಪ್ರಸ್ತುತ ಸಮಾಜಕ್ಕೆ ಇವರು ಕೂಡ ಪ್ರತ್ಯೇಕ ವರ್ಗವಾಗಿ ವರ್ಗೀಕರಿಸಲಾಗಿದೆ, ಅಲ್ಲಿಯವರು ಈ ವರ್ಗವನ್ನು ಸಿದ್ದಿ ಅಥವ ಹಬ್ಶಿ ಎಂದು ಕೂಡ ಕರೆಯುತ್ತಾರೆ.

"ಪಾಶಿಂಗ್ಟನ್ ಒಬೆಂಗ್" ಎಂಬುವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ "ಆಫ್ರಿಕನ್ ಸ್ಟಡೀಸ್" ವಿಷಯವನ್ನು ಬೋದಿಸುವ ಉಪನ್ಯಾಸಕ, ಕರ್ನಾಟಕದಲ್ಲಿರುವ ಆಫ್ರಿಕನ್ ಸಂತತಿಯ ಬಗ್ಗೆ ಈತ "ಶೇಪಿಂಗ್ ಮೆಂಬರಶಿಪ್" ಅನ್ನೊ ಪುಸ್ತಕ ಕೂಡ ಬರೆದಿದ್ದಾರೆ.

ಮುಂಡಗೋಡಿನ ಕೆಲವು ಚಿತ್ರಗಳು ನನಗೆ ಈ ರೀತಿಯಾಗೆ ಸಿಕ್ಕಿದೆ.









































0 comments:

Post a Comment