Saturday, May 8, 2010

"ಯಂಗ್ ಗಾಂಧಿ"

ಗಾಂಧೀಜಿ ಅಂದಾಕ್ಷಣ ನಮಗೆ ನೆನಪಾಗೋದು ಏನ್ ಹೇಳಿ??
ಒಬ್ಬೊಬ್ರು ಒಂದೊಂದ್ ರೀತಿ ಉತ್ತರಿಸಬಹುದು..ಉದಾಹರಣೆಗೆ
ಇಸ್ಕೂಲ್ ಮಕ್ಳು -- ಅವ್ರು "ಫಾದರ್ ಆಫ್ ದ ನೇಷನ್" ಅಂತ ಕ್ಲಾಸಲ್ಲಿ ಓದಿದ್ದನ್ನ ಬಡಬಡಿಸಬಹುದು,ನೀವಿನ್ನು ಜಾಸ್ತಿ ಕೇಳುದ್ರೆ ಗಾಂಧಿ ತಾತ ಕೋಲ್ ಹಿಡ್ಕೂಂಡಿರೊದ್ರಿಂದನೇ ಕಾಗೆಗಳು ಅವರ ಪ್ರತಿಮೆ ಮೇಲೆ ಕೂರೊಲ್ಲ...ಅನ್ನೊ ಜೋಕ್ ಹೊಡಿತಾರೆ....
ಸರ್ಕಾರಿ ನೌಕರರು -- ಅಕ್ಟೋಬರ್ ೨ ,ಗಾಂಧಿ ಜಯಂತಿ ದಿನ ಸರ್ಕಾರಿ ರಜೆ ಅಂತ ಫುಲ್ ಖುಷಿಯಿಂದ ನಕ್ಕೊಂಡು ಹೇಳ್ತಾರೆ.
ಕುಡುಕರಿಗೆ ಕೇಳೋದೆ ಬೇಡ ಬಿಡಿ...ಗಾಂಧೀಜಿ ಹುಟ್ಟಿದ್ ದಿವಸ "ಎಣ್ಣೆ" ಸಿಗೊಲ್ಲ , ಬಾರ್ ಹಿಂದಿನ್ ಬಾಗಿಲಿನಿಂದ ಸಿಕ್ಕುದ್ರು ಡಬಲ್ ರೇಟ್ ಕೊಡ್ಬೇಕಲ್ಲ ಅಂತ ಸ್ವಲ್ಪ ಬೇಸರ ವ್ಯಕ್ತಪಡಿಸಬಹುದು.
ಇನ್ನು ನನಗೆ ಕೇಳುದ್ರೆ ೧೦,೨೦,೫೦,೧೦೦.೫೦೦ ರೂಪಾಯಿ ನೋಟಲ್ಲಿ ಬರೋ ಹಸನ್ಮುಖಿ ಗಾಂಧಿ ತಾತನ್ನ ನೆನಪು ಮಾಡ್ಕೊತಿನಿ.
ಆದ್ರೆ ಸಾಧಾರಾಣವಾಗಿ "ಗಾಂಧೀಜಿ" ಹೆಸರು ಕೇಳಿದಾಕ್ಷಣ ಮನಸ್ಸಿನಲ್ಲಿ ಮೊಡಿ ಬರೋ ಚಿತ್ರ ಅಂದ್ರೆ
ಕೈಯಲ್ಲಿ ಕೋಲು ,ಬಿಳಿ ಕಚ್ಚೆ ,ಮೈ ಸುತ್ತ ಶಾಲು ರೀತೀಲಿ ಹೊದ್ದುಕೊಂಡಿರುತಿದ್ದ ಬಿಳಿ ಬಟ್ಟೆ ,ಬಕ್ಕ ತಲೆ. ನಮ್ ದೇಶ ಅಲ್ಲದೆ ಜಗತ್ತಿನಾದ್ಯಂತ ಇಂದಿಗೂ ಕೋಲು ,ಶಾಲು,ಕಚ್ಚೆ ಹಾಕಿಕೊಂಡಿರುವ ಅನೇಕ ಗಾಂಧೀಜಿಯ ಪ್ರತಿಮೆಗಳು ಶಾಂತಿ ಹಾಗು ಅಹಿಂಸೆಯ ದ್ಯೋತಕವಾಗಿ ನಗುತ್ತಾ ನಿಂತಿವೆ.
ಇದಕ್ಕೆ ಒಂದ್ ಪ್ರತಿಮೆ ಮಾತ್ರ ವಿಭಿನ್ನವಾಗಿ ನಿಲ್ಲುತ್ತೆ....ಇದು ದಕ್ಷಿಣ ಆಫ್ರಿಕಾದ ವಾಣಿಜ್ಯ ರಾಜಧಾನಿ ಜೋಹಾನ್ಸಬರ್ಗ್ ನಲ್ಲಿರುವ
ಗಾಂಧೀಜಿ ಪ್ರತಿಮೆ....ನಾನು ೨೦೦೮ನೇ ಇಸವಿ ಸೆಪ್ಟೆಂಬರ್ ನಲ್ಲಿ ಜೋಹಾನ್ಸಬರ್ಗ್ ಗೇ ಕೆಲಸದ ನಿಮಿತ್ತ ಹೋಗಿದ್ದೆ,ಅದೊಂದು ವಾರಾಂತ್ಯದ ರಜಾದಿನ ನಾನು ನನ್ನ ಮಿತ್ರರೊಂದಿಗೆ ಸಿಟಿ ಸುತ್ತಾಡಿಕೊಂಡು ಬರೋಕೆ ತೆರಳಿದೆ ,ನಗರದ ಹೃದಯಭಾಗದಲ್ಲಿರುವ "ಹಿಲ್ ಬ್ರೋ ಟವರ್" ನೋಡ್ಕೊಂಡು, ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಸ್ಲಮ್ (ಕೊಳಚೆ ಪ್ರದೇಶ) "ಸೊವೇಟೊ" ಮೇಲೆ ಹಾದು,ದಕ್ಷಿಣ ಆಫ್ರಿಕಾದ " ವರ್ಲ್ಡ್ ಆಫ್ ಬೀರ‍್" ಮಧ್ಯ ಸಂಸ್ಕರಣಾ ಘಟಕದಲ್ಲಿ ಒಂದು ಸುತ್ತು ಹಾಕಿಕೊಂಡು ಹೊರಗೆ ಬರೊಷ್ಟರಲ್ಲಿ ಸೂರ್ಯ ಇನ್ನೇನು ಮುಳುಗೋ ಸಮಯ, ಬೆಳಿಗ್ಗೆಯಿಂದ ಸುತ್ತಾಡಿದ್ಕೊ ಏನೋ ಕಣ್ಣಿಗೆ ಮೆಲ್ಲನೆ ನಿದ್ದೆ ಮಂಪರಿಗೆ ಜಾರ‍್ತಾ ಇತ್ತು, ಅಗ ನಮ್ ಕಾರ್ ಡ್ರೈವರ್ ಕ್ರಿಸ್ " ದೇರ್ ಇಸ್ ಅ "ಗ್ಯಾಂಡಿ" ಸ್ಟಾಚು ನಿಯರ್ ಬೈ " ಅಂತ ಅವನ ಪಕ್ಕದಲ್ಲಿ ಕುಳಿತಿದ್ದ ಥಾಮಸ್ ಕಡೆ ತಿರುಗಿ ಹೇಳಿದನು.ನಾವಿದ್ದ ಗುಂಪಿನಲ್ಲಿ ನಾನು ಮತ್ತೆ ಥಾಮಸ್ ಮಾತ್ರ ಭಾರತೀಯರಾಗಿದ್ದೇವು,"ಗಾಂಧಿ"ಯನ್ನು ಆಫ್ರಿಕನ್ ಭಾಷಾ ಧಾಟೀಲಿ "ಗ್ಯಾಂಡಿ" ಅಂತ ಸಂಭೋಧಿಸಿದ್ದು ಥಾಮಸ್ ಗೇ ಆರ್ಥ ಆಗ್ಲಿಲ್ಲ ಅನ್ಸುತ್ತೆ...ನಾನು ಅವನು ಹೇಳಿದ್ದನ್ನು ಮತ್ತೆ ಕೆದಕಿ ಪ್ರಶ್ನಿಸಿದಾಗ ಆ ಸ್ಟಾಚು ನಮ್ಮ ಗಾಂಧಿ ತಾತನೇ ಎಂದು ಖಾತ್ರಿ ಆಯಿತು,ಸರಿ ಅಲ್ಲಿಗೆ ಗಾಡಿ ತಿರುಗಿಸು ಕ್ರಿಸ್ ಅಂತ ಹೇಳಿದಾಗಲೇ ಕೋಲ್ ಹಿಡ್ಕೊಂಡಿರೊ ಅಜ್ಜನ ಚಿತ್ರ ಮನಸ್ಸಿನಲ್ಲಿ ಚಿತ್ತಾರವಾಗಿ ಚಿತ್ರಿಸಿ ಆಗಿತ್ತು .ಕಾರು ನಗರದ ಹೃದಯ ಭಾಗ ಅಂದ್ರೆ ಡೌನ್ ಟೌನ್ ಅಂತ ಕರೆಯೊ ಜಾಗದಲ್ಲಿ ನಾಲ್ಕೈದು ಶಿಸ್ತು ಬದ್ದವಾದ ಸಂಚಾರಿ ದೀಪವನ್ನು ದಾಟಿ "ಗಾಂಧಿ ಸ್ಕ್ವೆರ್" ಒಳಗೆ ಬಂತು, ಗಾಂಧಿ ಪ್ರತಿಮೆ ಇರೊ ಸುತ್ತಮುತ್ತಲಿನ ಪ್ರದೇಶಕ್ಕೆ "ಗಾಂಧಿ ಸ್ಕ್ವೆರ್" ಎಂದು ನಾಮಕರಣ ಮಾಡಿದ್ದಾರೆ.
ಕಾರಿನ ಕಿಟಕಿಯಿಂದಲೇ ಪ್ರತಿಮೆಯ ಪ್ರಥಮ ದರ್ಶನವಾದಾಗ ಸ್ವಲ್ಪ ಕನ್ ಫ್ಯುಸ್ ಆಗಿದ್ದೊಂತು ನಿಜ,ಕೆಳಗಿಳಿದು ಪ್ರತಿಮೆಯ ಹತ್ತಿರ ಬಂದಾಗಲೆ ತಿಳಿದಿದ್ದು ಅವರು "ಗಾಂಧೀಜಿ " ಎಂದು,ಈ ಪುತ್ತಳಿ ಸಂಪೂರ್ಣ ಭಿನ್ನವಾಗಿತ್ತು,ಸಾಂಪ್ರಾದಾಯಿಕವಾದ ಕೋಲು,ಕಚ್ಚೆ ಪಂಚೆ ಅಲ್ಲಿ ಇರಲಿಲ್ಲ,ಬ್ರಿಟಿಷರ ವಿರುದ್ಧ ಮುನ್ನುಗ್ಗುವ ಉತ್ಸಾಹದಲ್ಲಿ ಯಾವಾಗಲೂ ಮುಂದಿರುತಿದ್ದ ಬಲಗಾಲು ಎಡಗಾಲಿಗೆ ಸಮವಾಗಿತ್ತು ,ಕಣ್ಣಿಗೆ ಕನ್ನಡಕ ಇರಲಿಲ್ಲ,ತಲೆಯ ಮೇಲೆ ಸೊಂಪಾಗಿ ಬೆಳೆದಿದ್ದ ಕೇಶರಾಶಿಗೆ ಬಲದಿಂದ ಕ್ರಾಪ್ ಕೂಡ ತೆಗೆಯಲಾಗಿದೆ, ಕಪ್ಪು ಕೋಟ್ ಕಪ್ಪು ಪ್ಯಾಂಟ್ ಸಹಿತ ವಕೀಲರ ಗೌನ್ ಅವರ್ ಮೈ ಸುತ್ತುವರೆದೆತ್ತು,ಎಡಗೈಯಿಂದ ಒಂದು ಪುಸ್ತಕವನ್ನು ಎದೆಗವುಚಲಾಗಿತ್ತು.
ನನಗೆ ಆಗಲೆ ತಿಳಿದಿದ್ದು ಇದು ಗಾಂಧೀಜಿಯವರು ಹದಿಹರೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ "ಯಂಗ್ ಗಾಂಧಿ " ಎಂದು. ನಮ್ ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಹೆಸರಿನ ರಸ್ತೆ ಏನೋ ಇದೆ, ಆದ್ರೆ ಗಾಂಧಿ ಕಂಡ ಕನಸಿನ ರಾಮರಾಜ್ಯ ಅಲ್ಲಿ ನನಸಾಗೋದು ಕಷ್ಟ ಬಿಡಿ,ಅದಕ್ಕೆ ಆ ರಸ್ತೆಯ ಖದರ್ರಿಗೆ ,ಆ ಹೆಸ್ರಿಗೆ ಈ ರೀತಿ "ಯಂಗ್ ಗಾಂಧಿ" ಪ್ರತಿಮೆ
ಪ್ರತಿಷ್ಟಾಪಿಸಿದರೆ ಸ್ವಲ್ಪ ಅನುರೂಪವಾಗಿರುತ್ತೆ ಅಂತ ಅನ್ಸುತ್ತೆ ಅಲ್ವಾ....??



0 comments:

Post a Comment