Monday, May 24, 2010

ಚೂರ್ ನಗ್ರಿ....!!



ಯಾಕೋ ಏನೋ ಒಂದ್ ಜೋಕ್ ಹೇಳ್ಬೇಕು ಅನ್ನಿಸ್ತಿದೆ....


ನಮ್ ಗುಂಡ ಬೆಂಗಳೂರಲ್ಲಿ ಕೈ ತುಂಬಾ ಸಂಬಳ ಕೊಡೋ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ,,, ಇನ್ನೇನ್ ಕೆಲಸ ಸಿಕ್ಕಿದ್ದು ಆಯ್ತು ಮದುವೆ ಮಾಡಿ ಮುಗಿಸಿಬಿಡೋಣ ಅಂತ ಅವರ ಮನೆಯವರು ಡಿಸೈಡ್ ಮಾಡಿದ್ರು....ಗುಂಡನಿಗೆ ಮದುವೆ ok ಆದ್ರೆ ಸಿಟಿ ಹುಡುಗಿ ಬೇಡ ಹಳ್ಳಿ ಹುಡುಗಿನೇ ಮದ್ವೆ ಆಗ್ತೀನಿ ಅನ್ನೋ ಹಠ ಹಿಡಿದು ಮನೆಯವರನ್ನು ಈ ವಿಚಾರವಾಗಿ ಒಪ್ಪಿಸಿದ.ಹಳ್ಳಿ ಹುಡುಗಿಯರ ಸಹಜ ಸೌಂದರ್ಯ ,ಮುಗ್ಧತೆಗೆ ಗುಂಡ ಫುಲ್ ಫಿದಾ ಅಗ್ಬಿಟ್ಟಿದ್ದ,ಹಾಗು ಹೀಗೂ ಅವನ ಆಸೆಯಂತೆ ಗುಂಡ ಲಕ್ಷಣವಾಗಿರೋ ಹಳ್ಳಿ ಹುಡುಗಿಯನ್ನ ಮದುವೆ ಮಾಡ್ಕೊಂಡ.

ಮದುವೆ ಆಗಿದ್ದ್ ಮಾರನೆ ರಾತ್ರಿ ಪ್ರಸ್ಥಕ್ಕೆ ಟೈಮ್ ಫಿಕ್ಸ್ ಆಗಿತ್ತು... ಆ ದಿನ ಪೂರ್ತಿ ಗುಂಡ ಅವನ ಹೆಂಡ್ತಿಗೆ ಇವತ್ತು ನಮ್ ಹನಿಮೂನು,ಹನಿಮೂನು ಅಂತ ಅವಳಿಗೆ ರೇಗುಸ್ತಾ ಇದ್ದ,ಪಾಪ ಆ ಹುಡುಗಿಗೆ ಅಷ್ಟೊಂದು ಇಂಗ್ಲೀಷ್ ಜ್ನಾನ ಇಲ್ಲದೆ ಇದ್ದ ಕಾರಣ "ಅನಿಮೂನ್ ಅಂದ್ರೇನು ,ಎಂಗಿರುತ್ತೆ ...??" ಅಂತ ಮುಗ್ಧ ರೀತಿಯ ಪ್ರಶ್ನೆಗಳನ್ನ ಗುಂಡನಿಗೆ ಕೇಳ್ತಿದ್ಲು..ಆಗ ಗುಂಡ ರಾತ್ರಿ ಎಲ್ಲಾ ಗೊತ್ತಾಗುತ್ತೆ , ಸ್ವಲ್ಪ ಕಾಯಿ ಅಂತ ಅವಳ ಕೆನ್ನೆ ಚಿವುಟಿ ಹೇಳಿದ್ದ.

ಮೊದಲ ರಾತ್ರಿ ಕ್ಷಣ ಹತ್ತಿರ ಬಂದೇ ಬಿಡ್ತು ...ಹೂ ಮಂಚದ ಮೇಲೆ ಗಂಡ ಹೆಂಡತಿ ಇಬ್ಬರು ಸ್ವರ್ಗದ ಬಾಗಿಲು ತಟ್ಟೋಕೆ ಶುರು ಮಾಡಿದ್ರು,ಎಲ್ಲಾ ಮುಗಿದ ಮೇಲೆ ಗುಂಡ ಅವನ ಹೆಂಡತಿಗೆ "" ಹನಿಮೂನ್ ಅಂದ್ರೆ ಏನು ಅಂತ ಕೇಳಿದೆ ಅಲ್ವಾ...ಇದೇ ಹನಿಮೂನ್...ನಾವಿಷ್ಟು ಹೊತ್ತು ಆಡಿದ ಆಟಕ್ಕೆ ಹನಿಮೂನ್ ಅನ್ನೋದು"" ಅಂದ.ಅದಕ್ಕೆ ಅವನ ಹೆಂಡತಿ ""
ಅನಿಮೂನ್ ಅಂದ್ರೆ ಇದೇನಾ ...ಇಂತೋವ್ ಕಬ್ಬಿನ್ ಗದ್ದೇಲಿ ನಮ್ ಗೌಡ್ರು ಮಗ ನನ್ ಜೊತೆ ದಿವ್ಸ ಮಾಡ್ತಿದ್ದ,ಆದ್ರೆ ಆ ಮೂದೇವಿ ಅನಿಮೂನ್ ಅಂತಾ ಹೇಳೇ ಇಲ್ಲಾ ನೋಡು.."" ಅಂತ ನಾಚಿಕೊಂಡು ಹೇಳ್ಬಿಡೋದೇ??

ಪಾಪ ಗುಂಡನ ಗತಿ ಏನಾಗಿರ್ಬೋದು ಅವಾಗ???

0 comments:

Post a Comment